ದೇವಸ್ಥಾನದ ಬಗ್ಗೆ
English
ಶ್ರೀ ಮಹಾಲಿಂಗೇಶ್ವರ ದೇವಸ್ಥಾನವು ಉಪ್ಪಿನಂಗಡಿ ನಗರದಿಂದ 5 ಕಿಮೀ ದೂರದಲ್ಲಿರುವ ಕರಾಯ ಗ್ರಾಮದಲ್ಲಿದೆ, ಬೆಂಗಳೂರಿನಿಂದ ಶಿರಾಡಿ ಘಾಟ್ ಮೂಲಕ ಬರುವ ಭಕ್ತರು ಉಪ್ಪಿನಂಗಡಿ ಎಂಬ ಸ್ಥಳದಲ್ಲಿ ಇಳಿಯಬಹುದು,
ಅಲ್ಲಿಂದ 5 ಕಿಮೀ ಉಪ್ಪಿನಂಗಡಿ-ಬೆಳ್ತಂಗಡಿ ಮಾರ್ಗದಲ್ಲಿ ಬಂದರೆ ಕರಾಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವಿದೆ. ಈ ದೇವಾಲಯವು ಶಿವ
ದೇವಾಲಯವಾಗಿದೆ. ಮಕ್ಕಳಿಲ್ಲದ ದಂಪತಿಗಳಿಗೆ ಕರಾಯ ಶ್ರೀ ಮಹಾಲಿಂಗೇಶ್ವರ ದೇವರು ಮಕ್ಕಳನ್ನು
ಕರುಣಿಸುತಾನೆ ಎಂಬ ಬಲವಾದ ನಂಬಿಕೆಯಿದೆ. ಈ ದೇವಾಲಯದಲ್ಲಿ ಇತರ ಸಹಪರಿವಾರ (ಕನ್ನಡ ಪದ) ದೇವತೆಗಳಿವೆ ಗಣೇಶ, ಶಾಸ್ತವೇಶ್ವರ, ವಿಷ್ಣು ಮತ್ತು ದುರ್ಗೆಯನ್ನು ಸಹ ಈ ದೇವಾಲಯದಲ್ಲಿ ಪೂಜಿಸಲಾಗುತ್ತದೆ. ಈ ದೇವಾಲಯವನ್ನು ಬ್ರಾಹ್ಮಣ ಮನೆತನದ ಕುದ್ದಣ್ಣಾಯ ಎಂಬ ಕುಟುಂಬವು ಆಡಳಿತ ನಡೆಸುತಿತು ಎಂದು ಇತಿಹಾಸ ಹೇಳುತ್ತದೆ, ಇವರು ಈ ಗ್ರಾಮಕ್ಕೆ ಸೇರಿದವರು.